ಸರಸಂಘಚಾಲಕ್ ಭಾರತೀಯ ಬಲಪಂಥೀಯ, ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಅರ್ ಎಸ್ ಎಸ್ ) ಮುಖ್ಯಸ್ಥರು, ಭಾರತೀಯ ಜನತಾ ಪಕ್ಷದ ಇದರ ಮೂಲ ಸಂಘಟನೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ . ಆರೆಸ್ಸೆಸ್ ಸಂಘ ಪರಿವಾರದಪ್ರಮುಖ ಸಂಘಟನೆಗಳ ಮಾತೃ ಸಂಸ್ಥೆಯಾಗಿದೆ. ಇದು ವಿಶ್ವದ ಅತಿ ದೊಡ್ಡ ಸ್ವಯಂಸೇವಕರುಗಳ ಸಂಸ್ಥೆಯಾಗಿದೆ. ಹಿಂದಿನ ಸರಸಂಘಚಾಲಕರು ನಾಮನಿರ್ದೇಶನ ಮಾಡುವ ಮೂಲಕ ಮುಂದಿನ ಸರಸಂಘಚಾಲಕರನ್ನು ಆಯ್ಕೆಮಾಡುತ್ತಾರೆ. ೧೯೨೫ ರಿಂದ ಇದುವರೆಗೆ ಆರು ಜನರು ಸರಸಂಘಚಾಲಕ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯನ್ನು ಸ್ಥಾಪಿಸಿದ ಕೇಶವ ಬಲಿರಾಮ್ ಹೆಡ್ಗೆವಾರ್ ಮೊದಲನೆಯವರು ೧೯೨೫-೧೯೩೦ ರವರೆಗೆ. ಮುಂದುವರಿದು ೧೯೩೧-೧೯೪೦ ರವರೆಗೆ ಸರಸಂಘಚಾಲಕರಾಗಿ ಆಗಿ ಸೇವೆ ಸಲ್ಲಿಸಿದರು. ಮೋಹನ್ ಭಾಗವತ್ ರು ಪ್ರಸ್ತುತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರು. == ಸರಸಂಘಚಾಲಕರ ಪಟ್ಟಿ == == ಸಹ ನೋಡಿ == ಭಾರತೀಯ ಜನತಾ ಪಕ್ಷದ ಅಧ್ಯಕ್ಷರ ಪಟ್ಟಿ ಸ್ವಯಂಸೇವಕ == ಉಲ್ಲೇಖಗಳು ==